ಅಣಿಯಾಗಬೇಕಿವೆ ಕನ್ನಡ ಮನಸ್ಸುಗಳು…

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ!

ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ

ಕನ್ನಡದ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ!ಕನ್ನಡಂ ದೈವಮೈ!

ಕನ್ನಡದ ಶಬ್ದಮೆಮಗೋಂಕಾರಮೀಯೆನ್ನ

ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ-

ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳಗೆ?

ಅಂತ ಸಾಲಿ ರಾಮಚಂದ್ರರಾಯರು ಕನ್ನಡ ನುಡಿಯ ಬಗ್ಗೆ ಕನ್ನಡಿಗನಿಗಿರುವ ಕನ್ನಡ ಬಗ್ಗೆ ಗರ್ವವನ್ನು ಅತ್ಯದ್ಭುತವಾಗಿ ವಿವರಿಸಿದ್ದಾರೆ. ನೂರಾರು ಸಂಸ್ಥಾನಗಳಾಗಿ ಹಂಚಿ ಹೋಗಿದ್ದ ಭಾರತವನ್ನು ಸ್ವಾತಂತ್ರ್ಯ ನಂತರ ಭಾಷಾವಾರು ವಿಂಗಡನೆ ಆಧಾರದ ಮೇಲೆ, ವಿವಿಧ ರಾಜ್ಯಗಳ ರಚನೆ ಮಾಡಲಾಯಿತು. ಅದರಂತೆ ಮೈಸೂರು ಸಂಸ್ಥಾನ ಮತ್ತು ದಕ್ಷಿಣದಲ್ಲಿದ್ದ ಹೈದರಾಬಾದ್ ಪ್ರಾಂತ್ಯ, ಮುಂಬೈ ಪ್ರಾಂತ್ಯ, ಮದರಾಸು ಪ್ರಾಂತ್ಯಗಳ ಕನ್ನಡ ಮಾತನಾಡುವ ಪ್ರದೇಶಗಳನ್ನು ಸೇರಿಸಿ ಮೈಸೂರು ರಾಜ್ಯವೆಂದು ೧೯೫೬ರ ನವೆಂಬರ್ ೧ರಂದು ನೂತನ ರಾಜ್ಯದ ಜನನವಾಯಿತು. ೧೯೭೩ ರಲ್ಲಿ ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಅಂದಿನ ಮುಖ್ಯಮಂತ್ರಿ ಶ್ರೀ ಯುತ ದೇವರಾಜ ಅರಸ್ ಅವರ ಸರ್ಕಾರ ಮರುನಾಮಕರಣ ಮಾಡಿತು. ಹೀಗೆ ನಾವೆಲ್ಲರೂ ಪ್ರತಿ ವರ್ಷ ರಾಜ್ಯೋತ್ಸವ ವನ್ನು ಆಚರಿಸುತ್ತೆವಸ್ಟೆ ಆದ್ರೆ ನಾವುಗಳು ನಮ್ಮ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ, ಅಭಿಮಾನ ಪ್ರೀತಿಯನ್ನು ನಾವುಗಳು ರೂಡಿಸಿಕೊಂಡಿಲ್ಲ.

ಕನ್ನಡವೊಂದು ಭಾಷೆ ಮಾತ್ರವೇ ಅಲ್ಲ, ಅದೊಂದು ಸಂಸ್ಕೃತಿ, ಅದೊಂದು ದೇಶ, ಅದೊಂದು ಸಂಸ್ಕಾರ, ಜೀವನಶೈಲಿ, ಅದೊಂದು ಸಂಪ್ರದಾಯ, ಪರಂಪರೆಯೂ ಹೌದು. ಈ ಹೆಮ್ಮೆಯ, ನಲುಮೆಯ, ಒಲುಮೆಯ ಚಿಲುಮೆಯೇ ಆಗಿರುವ ಚೆನ್ನುಡಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅದೆಂಥದೋ ಹೇಳಿಕೊಳ್ಳಲಾರದ ಆತಂಕವೊಂದು ಕನ್ನಡವನ್ನು ಕಾಡುತಿದೆ. ರಾಜಧಾನಿ ಬೆಂಗಳೂರು ಸಹಿತವಾಗಿ ಹಲವಾರು ಪ್ರಮುಖ ಪಟ್ಟಣಗಳು ಬಹುಸಂಸ್ಕೃತಿ ನಗರವಾಗಿ ರೂಪುಗೊಳ್ಳುತ್ತಿವೆ ಇದಕ್ಕೆ ಕಾರಣ ಉದಾರೀಕರಣ, ಜಾಗತೀಕರಣದ ಭರಾಟೆ. ಜಗತ್ತಿನ ನಾಲ್ಕಾರು ಕೋಟಿ ಜನ ಮಾತನಾಡುವ ಭಾಷೆ ಕನ್ನಡ; ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆಗಳ ಸಾಲಿನಲ್ಲಿ 27ನೇ ಸ್ಥಾನದಲ್ಲಿದೆ ಕನ್ನಡ; ಪಂಚದ್ರಾವಿಡ ಭಾಷೆಗಳಲ್ಲೊಂದು ಕನ್ನಡ; ಭಾರತದ ಅಧಿಕೃತ 22 ಭಾಷೆಗಳಲ್ಲೊಂದು ಕನ್ನಡ; ಕರ್ನಾಟಕದ ಆಡಳಿತ ಭಾಷೆ ಕನ್ನಡ; ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತ್ಯ ಕನ್ನಡ; ತುಳು, ಕೊಂಕಣಿ ಮತ್ತು ಕೊಡವ ಭಾಷೆಗಳನ್ನು ಬರೆಯಲು ಉಪಯೋಗಿಸುವ ಲಿಪಿ ಕನ್ನಡ. ಇಷ್ಟೊಂದು ಹೆಗ್ಗಳಿಕೆ-ಬಳಕೆಯಿರುವ ಕನ್ನಡವೇಕೆ ಆಗಾಗ ಅವಮಾನಕ್ಕೊಳಗಾಗುತ್ತಿದೆ? ಗಡಿ ಜಗಳವೇಕೆ ವರ್ಷಕ್ಕೊಮ್ಮೆ ಮುಗಿಲು ಮುಟ್ಟುತ್ತದೆ? ಶಾಸ್ತ್ರೀಯ ಸ್ಥಾನ-ಮಾನಕ್ಕೇಕೆ ಇಷ್ಟು ವರ್ಷಗಳ ಕಾಲ ಕಾಯಬೇಕಾಯಿತು?. ಇವೆಲ್ಲ ಪ್ರಶ್ನೆಗಳಿಗೆ ಕಾರಣ ಕನ್ನಡಿಗನ ಬೇಜವಾಬ್ದಾರಿತನ ಅಂತ ನಾನು ಇಲ್ಲಿ ನಮುದಿಸುವದಿಲ್ಲ, ಪರಭಾಷಾ ಪ್ರೀತಿ ಹಾವಳಿ ಮತ್ತು ಪರಭಾಷಿಕರ ಸಂಖೆ ಹೆಚ್ಚಗುತೀರುವದೆ ಇದಕ್ಕೆ ಮೂಲ ಕಾರಣವಿರಲೂಬಹುದು.

ಕನ್ನಡಿಗರು ಸರ್ಕಾರಿ ಉದ್ಯೋಗ ದಕ್ಕಿಸಿಕೊಳ್ಳಲು ಹತ್ತಾರು ವರ್ಷ ಕಾಯುತ್ತಾ ಕುಳಿತರೆ, ಇಂಗ್ಲೀಷ್ ಕಲಿತಿರುವ ಪರಭಾಷಿಕರಿಗೆ ನಮ್ಮ ರಾಜ್ಯದಲ್ಲಿನ ಐಟಿ, ಬಿಟಿ, ಹೊರಗುತ್ತಿಗೆ ಮುಂತಾದ ಖಾಸಗಿ ಉದ್ಯೋಗಗಳು ಸುಲಭವಾಗಿ ದಕ್ಕುತ್ತಿವೆ. ಎಲ್ಲೋ ಬೆರಳಿಣಿಕೆಯಷ್ಟು ಕನ್ನಡಿಗರು ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಕಲಿತು ಪರಭಾಷಿಕರಿಗೆ ಪೈಪೋಟಿ ಒಡ್ಡುತ್ತಿದ್ದರೆ ಕನ್ನಡ ಕಲಿತ ಕನ್ನಡಿಗರು ಉದ್ಯೋಗ ಸಿಗದೇ ಪರಿತಪಿಸುವಂತಾಗಿದೆ. ನಮ್ಮ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಗಳಲ್ಲೂ ಪರಭಾಷಿಕರ ಹಾವಳಿ ಹೆಚ್ಚಾಗಿದೆ, ಈ ಕಂಪನಿಗಳೆಲ್ಲ ಒಂದೋ ನಮ್ಮ ಕನ್ನಡಿಗರು ಸ್ಥಾಪಿಸಿದವು ಇಲ್ಲವೆ, ಕನ್ನಡಿಗರು ನಿರ್ಮಿಸಿರುವ ಉದ್ಯಮಸ್ನೇಹೀ ವಾತಾವರಣದಿಂದಾಗಿ ಇಲ್ಲಿಗೆ ಬಂದಿರುವ ವಿದೇಶಿ, ದೇಶಿ ಕಂಪನಿಗಲ್ಲಿನ ಟೀಮ್ ಲೀಡರ್, ಪ್ರಾಜೆಕ್ಟ್ ಮೇನೇಜರ್ ಹುದ್ದೆಗಳಲ್ಲಿರುವವರೆಲ್ಲ ಪರಭಾಶಿಕರೆ . ಹೀಗೆ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತುಕೊಂಡಿರುವ ಇವರು ತಮ್ಮ ರಾಜ್ಯದವರನ್ನೇ ತಂದುತುಂಬಿಕೊಳ್ಳುತ್ತಿರುವುದರಿಂದ ಕನ್ನಡಿಗರಿಗೆ ಸಾಫ್ಟ್ ವೇರ್ ಕ್ಷೇತ್ರದಲ್ಲೂ ಅನ್ಯಾಯವಾಗುತ್ತಿದೆ, ಕಿರುಕುಳಕ್ಕೂ ಒಳಗಾಗುತ್ತಿದ್ದಾರೆ. ಇನ್ನು ಕನ್ನಡ ಸಿನಿಮಾ ಮಂದಿಯ ವಿಚಾರಕ್ಕೆ ಬರೋಣ. ಇವರಿಗೆ ಕನ್ನಡ ಭಾಷೆಯ ಅಸ್ತಿತ್ವ ಬೇಕು. ಆದರೆ ನಾಯಕಿ, ಸಂಗೀತ ನಿರ್ದೇಶಕರು, ಹಾಡುಗಾರರು ಪರಭಾಷೆಯವರೇ ಬೇಕು. ಹಿಗಿರಬೇಕಾದ್ರೆ ಹೇಗೆ ನಮ್ಮ ಸ್ವ ಭಾಷಾ ಉದಯೊನ್ಮುಖ ಕಲಾವಿದರಿಗೆ ಅವಕಾಶಗಳು ಸಿಗುತ್ತವೆ ನೀವೇ ಹೇಳಿ. ಇನ್ನು ಇಂಗ್ಲೀಷ್ ಇಲ್ಲದಿದ್ದರೆ ವಿವಿಧ ರಾಜ್ಯಗಳಲ್ಲಿ ಸಂವಹನ ಕಷ್ಟ. ಬಹುಭಾಷಾ ರಾಷ್ಟ್ರದಲ್ಲಿ ಇಂಗ್ಲೀಷ್ ಸಂಪರ್ಕ ಭಾಷೆಯಾಗಿರುವುದರಿಂದ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂಬುದನ್ನು ಪೋಷಕರು ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಶಿಕ್ಷಣ ಕೊಟ್ಟರೆ ಕನ್ನಡದ ಗತಿಯೇನು ಎನ್ನುವುದೇ ಈಗ ಭೂತಾಕಾರದ ಪ್ರಶ್ನೆಯಾಗಿ ಉಳಿದಿದೆ.

ಇನ್ನು ಹತ್ತಾರು ವರ್ಷಗಳಲ್ಲಿ ಕನ್ನಡವೆಲ್ಲಿದೆ ಎಂದು ದುರ್ಬೀನಿನಲ್ಲಿ ಹುಡುಕುವ ಪರಿಸ್ಥಿತಿ ಬರುವುದೇ? ಆಗ ಕನ್ನಡ ರಾಜ್ಯೋತ್ಸವ, ಕರ್ನಾಟಕ ರಾಜ್ಯ ಎನ್ನುವುದಕ್ಕೆ ಅರ್ಥವಿರುತ್ತದೆಯೇ? ಹೀಗಾಗದಿರಲು ಕನ್ನಡಿಗರು ಹಾಗು ಸರ್ಕಾರ ಏನು ಮಾಡಬೇಕು?. ಇವೆಲ್ಲವಕ್ಕೆ ಒಂದೇ ಉತ್ತರ ಕನ್ನಡಿಗರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಅಗ್ರಪ್ರಾಶಸ್ತ್ಯ ನೀಡುವುದು, ಖಾಸಗಿ ಉದ್ಯೋಗಗಳಲ್ಲಿ ಸ್ವಲ್ಪ ಭಾಗವಾದರೂ ಕನ್ನಡಿಗರಿಗೆ ಮೀಸಲಿಡುವಂತೆ ಸರ್ಕಾರದ ಆದೇಶ ಕಡ್ಡಾಯವಾಗಿ ಜಾರಿಗೆ ತರುವ ಮ‌ೂಲಕ ಕನ್ನಡಿಗರ ಹಿತರಕ್ಷಣೆ ಮಾಡುವ ಕೈಂಕರ್ಯವನ್ನು ಸರ್ಕಾರ ತೊಡಬೇಕು. ಖಾಸಗಿ ಉದ್ಯಮಗಳಲ್ಲೂ ಕನ್ನಡವನ್ನು ಸಂಪರ್ಕ ಭಾಷೆಯಾಗಿ ಬಳಸಲು ಆದಷ್ಟು ಒತ್ತಡ ಹೇರುವ ಮ‌ೂಲಕ ಕನ್ನಡವನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬ ಕನ್ನಡಿಗ ಯತ್ನಿಸಬೇಕಾಗಿದೆ.

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವದು..

ಸಿರಿಗನ್ನಡಂ ಗೆಲ್ಗೆ… ಜೈ ಕರ್ನಾಟಕ ಮಾತೆ..

ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

ಶುಭಾಶಯ

Posted in 1, My Favourites | 2 ಟಿಪ್ಪಣಿಗಳು

Misunderstand ಮಾಡ್ಕೋ ಬ್ಯಾಡ please…

ನಾ Engineering ಓದೋ ಕಾಲ ಅದು, ನಮ್ಮದು ಒಂದು ಪುಟ್ಟ ಗ್ಯಾಂಗ್,  College ನ ಪ್ರತಿಯೊಂದು ಚಟುವಟಿಕೆಗಳಲ್ಲಿ ನಮ್ಮ ಈ ಪುಟ್ಟ gang ಸಕ್ರಿಯವಾಗಿ ಭಾಗಿಯಾಗ್ತಾ ಇತ್ತು. ಒಂದು ದಿನ ಹೀಗೆ  College ನ Gymkhana  ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕಾಗಿ ಸ್ಟೇಜ್ಅನ್ನು ಅಲಂಕರಿಸ್ತ ಇದ್ದೆ ಆಗ ನನ್ನ ಹಿಂದೆ ಬಂದು ಯಾರೋ “Excuse me ಸರ್ ನಿಮಗೆ ಅಲ್ಲಿ ಕರಿತಾ ಇದ್ದಾರೆ” ಅಂತ ಒಂದು ಹೆಣ್ಣು ಧ್ವನಿ ಕೇಳಿಸಿತು. ಹಿಂದೆ ತಿರುಗೆ ನೋಡಿದೆ ನೀಲಿ ಬಣ್ಣ ದ ಡ್ರೆಸ್ ನಲ್ಲಿ ಒಂದು ಸುಂದರ  ನಗು ನನ್ನ ನೋಡ್ತಾ ಇತ್ತು. ನಾನು ಆ ನಗುವನ್ನೇ ನೋಡ್ತಾ ನಿಂತಿದ್ದೆ, ದೂರದಿಂದ ನನ್ನ ಚಡ್ಡಿ ದೋಸ್ತ್ ಸಿದ್ದ ಶಿವ ಪೂಜೆ ಅಲ್ಲಿ ಕರಡಿ ಬಿಟ್ಟರು ಅನ್ನೋ ಹಂಗ “ಸಾಕಲೇ ನೋಡಿದ್ದು ಆಕೀಗೆ… ಸುಟ್ಟು ಹೊಗ್ಯಳು ಆಕಿ…  ನಾನೇ ಹೇಳಿದ್ದು ಆಕೀಗೆ ನಿಂಗ ಕರಿ ಅಂತ… ಹಿರೆಮಟ್ ಮಾಸ್ತರ ನಿಂಗೆ ಕರಿಯಾಕ ಹತ್ತ್ಯಾರ..” ಅಂದಾಗಲೇ ನಂಗೆ ಅರಿವು ಆಗಿದ್ದು. ಮನಸಿನಲ್ಲಿ ಈ ನನ್ನ ದೋಸ್ತ್ ಸಿದ್ದನ ಬೈಕೊಂಡು ಆ ಹುಡುಗಿ ಅನ್ನೇ ನೋಡ್ತಾ ನಮ್ಮ ಮಾಸ್ತರ್ ಬಳಿ ಹೋದೆ.

ಆ ದಿನ ನಂಗೆ ಇನ್ನೋದ್ನು ಆಶ್ಚರ್ಯ ಕಾದಿತ್ತು ಸಮಾರಂಭದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಾನೇ ನಡೆಸಿಕೊಡ್ತಾ ಇದ್ದೆ, ನಾನು ” a next dance performance by Flora group” ಅಂತ ಹೇಳಿ ಆ ಗ್ರೂಪ್ ನವರನ್ನು stage ಗೆ ಆವ್ಹಾನಿಸಿದೆ. ಮರುಕ್ಷಣ ನಾ ಹಿಂದೆ ತಿರುಗಿ ನೋಡಿದೆ ಹಸಿರು ಬಣ್ಣದ ಸೀರೆ ಹಾಕಿರುವ ಅದೇ ನಗು ಮರಾಠಿ ಹಾಡೊಂದಕ್ಕೆ ನೃತ್ಯ ಮಾಡ್ತಾ ಇತ್ತು. ಆ ಗ್ರೂಪ್ ನ ನೃತ್ಯ ಮುಗಿಯೋವರೆಗೂ ಬರಿ ಆ ನಗುವೊಂದನ್ನೇ ನೋಡ್ತಾ ಮೈಮರೆತು ಬಿಟ್ಟೆ. ಬಹುಷ್ಯ ಆಗಲೇ ನಂಗು ಅನಿಸಿದ್ದು ಎಲ್ಲರು ಹೇಳೋ ಹಾಗೆ  “Love at First sight” ನಿಜ ಅಂತ. ಆ ನೃತ್ಯ ಮುಗಿಯೋದ್ರಲ್ಲಿ ನಾನು ಪ್ರೀತಿ ಎಂಬ ಮದುರ ಯಾತನೆಯಲ್ಲಿ ಜಾರಿದ್ದೆ. ಹೀಗೆ ನಾನು ಪ್ರೀತಿ ಪ್ರೇಮ ಅಂತ ಹೇಳೋ ಅವರ ಕುಟುಂಬದ ಸದಸ್ಯನಾದೆ.

ಮಾರನೆ ದಿನ College ನ ಕ್ಯಾನ್ಟಿನ್ ನಲ್ಲಿ ಎಲ್ಲ ಗೆಳೆಯರ ಜೊತೆ ಕುಳಿತಿರಬೇಕಾದರೆ ಮತ್ತೆ ಆ ನಗು ನಾವು ಕುಳಿತಲ್ಲಿ  ಬಂದು ಆ ನನ್ನ ಚಡ್ಡಿ ದೋಸ್ತ್ ಸಿದ್ದನ ಹತ್ತಿರ text book ಒಂದನ್ನು ಕೇಳ್ತಾ ಇತ್ತು ಅಸ್ಟರಲ್ಲಿ ನಾನು ಮದ್ಯ “I have that text book if u want i can give u” ಅಂತ ಹೇಳಿಏ ಬಿಟ್ಟೆ. ಮತ್ತೆ ಆಕಡೆ ಇಂದ “Thank you very much sir..” ಅಂತ ಹೇಳಿ ತನ್ನ ಪರಿಚಯ ವನ್ನು ಮಾಡಿ ಕೊಟ್ಟಿತು. ಆಗಲೇ ನಂಗೆ ಗೊತಾಗಿದ್ದು ಆ ನಗು ನನ್ನ ಜೂನಿಯರ್ ಎಂದು. ಹೀಗೆ ನಮ್ಮ ಗೆಳೆತನ ಶುರುವಾಯಿತು. ದಿನಾಲೂ ಕ್ಲಾಸ್ ಮುಗಿದ ಮೇಲೆ ಅವಳು ಬರೋದನ್ನೇ ನೋಡಿಕೊಂಡು ಕಾಯುತ್ತ ಡಿಪಾರ್ಟ್ಮೆಂಟ್ ನ  ಎದ್ರುಗಡೆ ನಿಲ್ಲುತಾ ಇದ್ದೆ. ಇಬ್ಬರು ದಿನಾಲೂ ಗಂಟೆಗಳಷ್ಟು  ಮಾತಾಡ್ತಾ ಇದ್ದ್ವಿ ಇಷ್ಟು ಸಾಲದು ಅಂತ ಅವಳು ನಮ್ಮ ಮನೆಗೆ ಫೋನ್ ಮಾಡೋದು ಮತ್ತೆ ಬರೋದು ಶುರು ಆಯಿತು. ಹೀಗೆ ನಾನು ಮತ್ತು ಅವಳು ಒಳ್ಳೆ ಸ್ನೇಹಿತರಾದೆವು.ನಾವು ಮಾತಾಡೋದನ್ನ ಸುತ್ತದೊದನ್ನ ಕಂಡು College ನಲ್ಲಿ ಸ್ನೇಹಿತರು ಇಬ್ಬರನ್ನು Love Birds ಅಂತ ಆಡ್ಕೋತಾ ಇದ್ದರು.

ಹೀಗೆ ಅವಳ ಜೊತೆ ಮತ್ತೆ ನನ್ನ ಪುಟ್ಟ ಗ್ಯಾಂಗ್ ಜೊತೆ ಸೇರಿ 3 ವರುಷ ಕಳೆದಿದ್ದು ಗೊತ್ತೇ ಆಗ್ಲಿಲ್ಲ. ನಾನು ಅಂತಿಮ ಸೆಮಿಸ್ಟರ್ ಅಲ್ಲಿ ಇರ ಬೇಕಾದ್ರೆ ನನ್ನ ಗೆಳೆಯರೆಲ್ಲ ಸೇರಿ ನಂಗೆ “ಇನ್ನ ನಿನ್ನ ಹತ್ತಿರ ಬರಿ 3 ತಿಂಗಳು ಬಾಕಿ ಅದಾವು  ಅವಳ ಮನಸ್ಸಿನ್ಯಾಗ ಏನ್ ಐತ್ಹಿ ಅಂತ ತಿಳ್ಕೋ..”  ಅಂತ ಬುದ್ದಿ ಹೇಳಾಕ ಶುರು ಮಾಡಿದ್ರು. ನನಗೇ ಇದು ಯಾಕೋ ಸರಿ ಅನ್ನಿಸಲಿಲ್ಲ “ನಮಿಬ್ಬರ ಮದ್ಯ ಏನು ಇಲ್ಲ ನಾವು ಬಾಳ್ ಚಲೋ ದೋಸ್ತರು ಅಸ್ಟೆ..” ಅಂತ ಹೇಳಿ ಮಾತು ಮರೇಸ್ತ ಇದ್ದೆ. ಒಂದು ದಿನ ಹೀಗೆ ಕ್ಯಾನ್ಟಿನ್ ಅಲ್ಲಿ ಕುತಿರ ಬೇಕಾದ್ರೆ ಅವಳು ಯಾರೋ ಹುಡುಗನ ಜೊತೆ ನಗ್ತಾ ಮಾತಾಡ್ತಾ ಇದ್ದಿದನ್ನು ಕಂಡು ನಂಗೆ ಕೋಪ ಬಂತು. ಯಾಕೋ ನಂಗೆ ಆ ದಿನಾ ಹಾಗೆ ಅನ್ನಿಸಿತು ಗೊತ್ತಾಗ್ಲಿಲ್ಲ, ಅವಳು ದಿನಾಲೂ ನನ್ನ ಗೆಳೆಯರ ಜೊತೆ ಮಾತಾಡ ಬೇಕಾದ್ರೆ ಏನು ಅನಿಸ್ತಾ ಇರಲಿಲ್ಲ, ನನಗೇ ಹೀಗೆ ಆಗಿದ್ದು ಮೊದಲನೇ ಸಲ. ಮತ್ತೆ ನನ್ನ ಎಲ್ಲ ದೋಸ್ತರು ಸೇರಿ “ನೋಡು ಇದಕ್ಕ ಹೇಳೋದು ಅವಳ ಮನಸ್ಸಿನ್ಯಾಗ ಏನ್ ಐತ್ಹಿ ಅಂತ ತಿಳ್ಕೋ ಅಂತ..” ಮತ್ತೆ ಅದೇ ಹಾಡು ಅದೇ ರಾಗ ಅಂತ ಬುದ್ದಿ ಹೇಳಲು ಪ್ರಾರಂಬಿಸಿದರು.

ಅಂದು ಮೇ 5 ನೆಯ ಭಾನುವಾರದ ದಿನ ಬೆಳಿಗ್ಗೆ ನನ್ನ ದೋಸ್ತ್ ಸಿದ್ದ ಅವನ ಮೊಬೈಲ್ ಇಂದ ಅವಳಿಗೆ ಫೋನ್ ಮಾಡಿ ಕೊಟ್ಟಿ ಏ ಬಿಟ್ಟ ನಾನು ಅವಳಿಗೆ “ಸಾಯಂಕಾಲ ಕಾಲೇಜ್ ನ ಗಾರ್ಡನ್ ಒಳಗ wait ಮಾಡ್ತಾ ಇರ್ತೀನಿ ಬಾ.” ಅಂತ ಹೇಳಿದೆ. ಅಸ್ಟರಲ್ಲಿ ಅವಳು “ಇವತ್ತೇನು special..?..ಯಾರದು Birth day..??” ಅಂತ ಕೇಳಿದಳು ಮತ್ತೆ ನಾನು ಅದಕ್ಕೇ ಉತ್ತರವಾಗಿ “ಇಲ್ಲ ಇವತ್ತು ಭಾಳ ಅಂದ್ರ ಭಾಳ important ಮಾತಾಡೋದು ಅದ ಬಾ..” ಅಂತ ಹೇಳಿ ಫೋನ್ ಇಟ್ಟೆ. ಆ ದಿನ ಸಾಯಂಕಾಲ ನನ್ನ ದೊಸ್ತರೆಲ್ಲರು ಸೇರಿ ಒಂದು ಗ್ರೀಟಿಂಗ್, Dairy milk ಚಾಕಲೇಟ್ ಮತ್ತೆ ಒಂದು ಹೂವಿನ ಗುಚ್ಛವನ್ನು ನನ್ನ ಇನ್ನೊಬ್ಬ ಚಡ್ಡಿ ದೋಸ್ತ್ ರವಿ ನ gift ಅಂಗಡಿ ಇಂದ ಉದ್ರಿ ಹೇಳಿ ತಂದು ನನ್ನ ಕೈ ಅಲ್ಲಿ ಕೊಟ್ಟೆ ಬಿಟ್ಟರು. ಮತ್ತೆ ಎಲ್ಲರು ನನ್ನ ಜೊತೆ ನಾವು garden ಗೆ ಬರ್ತಿವಿ ನಡಿ ಅಂತ ಹೇಳಿ ಕರೆದುಕೊಂಡು ಹೋದ್ರು.

ಎಂದಿನಂತೆ ನಾನು ಅವಳು ಬರೋದನ್ನೇ ಕಾಯುತ್ತ ಲೇಡೀಸ್ ಹಾಸ್ಟೆಲ್ ನ ಮುಂದಿನ ದಾರಿ ಅಲ್ಲಿ ನಿಂತು ಕೊಂಡೆ. ಮತ್ತೆ ಅದೇ ನೀಲಿ ಬಣ್ಣದ ಡ್ರೆಸ್ ಹಾಕಿ ಕೊಂಡ ಅವಳು ನಗುತ್ತಲೇ ಬಂದಳು . ಇಬ್ಬರು ಒಂದು ಗಿಡದ ಕೆಳಗೆ ಕುಳಿತು ಕೊಂಡೆವು. ಅವಳು ನಾನು ಕೈ ಅಲ್ಲಿ ಹಿಡಿದಿರುವ ಹೂವಿನ ಗುಚ್ಹವನ್ನೇ ನೋಡ್ತಾ ಇದ್ದಳು. ನಾನು ಹಂಗೆ ಮಾತನಾಡಲು ಶುರು ಮಾಡಿದೆ “ಇದೆ ನೀಲಿ ಬಣ್ಣದ ಡ್ರೆಸ್ ನಲ್ಲಿ ನಾನು ನಿಂಗೆ ನೋಡಿದು First time.” ಅಂತ ಹೇಳಿದೆ. ಆಗ ಅವಳು ಅದಕ್ಕೇ “ನಿ ಹುಚ್ಚಾ ಬಿಡು.. ನಿ ಹಿಂಗಾ..” ಅಂತ ಹೇಳಿ ನಕ್ಕಳು. ಮತ್ತೆ ಅದೇ ನಗುವನ್ನು ನೋಡಿ ನನ್ನ ಮನಸಿನಲ್ಲಿ ಹೆದರಿಕೆ ಶುರುವಾಯಿತು ಹೇಗೆ ಕೇಳ ಬೇಕು ಅಂತ ಗೊತ್ತಾಗದೆ ಅವಳನ್ನೇ ನೋಡ್ತಾ ಕುಳಿತ್ತಿದ್ದೆ ಅಸ್ಟರಲ್ಲಿ ಅವಳು ನನ್ನ ಕೈ ಅಲ್ಲಿ ಇದ್ದ ಕವರ್ ಅನ್ನು ತಗಿದು”ಏನೋ..?? ಯಾರಿಗೋ Propose ಮಾಡೋ plan ಇದೆ ಅಲ್ಲ..” ಅಂತ ಹೇಳಿ ಆ ಕವರ್ ಅನ್ನು ತಗಿದು ಅದ್ರಲ್ಲಿ ಇರೋ greeting ಕಾರ್ಡ್ ಅನ್ನು ಓದಿಯೇ ಬಿಟ್ಟಳು ಮಾರಾಯಿತಿ. ನನಗೇ ಮೈ ಅಲ್ಲಿ ನಡುಕ, ನನ್ನ ಬಾಯಿ ಅಲ್ಲಿ ನೀರು ಬತ್ತಿ ಹೋಯಿತು ಮತ್ತೆ  ಜೊತೆಗೆ ಎಲ್ಲಿಲ್ಲದ ಭಯ ಶುರು ವಾಗಿಯೇ ಬಿಟ್ಟಿತ್ತು. ನನಗೇ ಏನು ಮಾತದುವದ್ಕ್ಕೆ ಆಗ್ಲೇ ಇಲ್ಲ ಬರಿ ಅವಳನ್ನೇ ನೋಡ್ತಾ ಇದ್ದೆ.  ಅವಳು ಮತ್ತೆ ಆ ಕವರ್ ಅಲ್ಲಿದ್ದ Dairy milk ಚಾಕಲೇಟ್ ಅನ್ನು ತಗಿದು “Thank u for the ಚಾಕಲೇಟ್ …” ಹೇಳಿ “Please ನನ್ನ  Misunderstand ಮಾಡ್ಕೋ ಬ್ಯಾಡ.. ನಾವಿಬ್ಬರೂ ಒಳ್ಳೆ ಫ್ರೆಂಡ್ಸ್ ಅಸ್ಟೆ.. ನಾನು ನಿನ್ನ ಬಗ್ಗೆ ಆ ತರ ಯೋಚಿಸಿಲ್ಲ.. ಮತ್ತೆ I am engaged… ನಿ ನನ್ನಗೆ ಒಬ್ಬ ಒಳ್ಳೆ adviser ಮತ್ತೆ ಒಳ್ಳೆ Senior ಅಸ್ಟೆ .. otherwise please don’t Misunderstand me..” ಅಂತ ಹೇಳಿದಳು.. ಆಕ್ಷಣ ನಂಗೆ ಏನು ಹೇಳ್ ಬೇಕು ಅಂತ ಗೊತ್ತಾಗದೆ ಸುಮ್ನೆ ಕುಳಿತು ಬಿಟ್ಟೆ. ಒಂದೇ ಕ್ಷಣದಲ್ಲಿ ಏನ್ ಏನೋ ಆಗಿ ಹೊಇತು. ನಾನು ಹಾಗೆ ನೋಡ್ತಾ ಇದ್ದೆ ಅವಳು “Please Misunderstand ಮಾಡ್ಕೋ ಬ್ಯಾಡ.. “ಅಂತ ಹೇಳ್ತಾ ಕೈ ಅಲ್ಲಿ ಇದ್ದ ಚಾಕಲೇಟ್ ಅನ್ನು ತಿನ್ನುತ್ತಾ ಹೂವಿನ ಗುಚ್ಹ ಅನ್ನು ತಗೆದೊಕೊಂದು ಹೊರಟೆ ಬಿಟ್ಟಳು. ಇದು ಆದ  ಕೆಲವು  ದಿನ ಅವಳು ನನ್ನನು ಭೇಟಿ ಮಾಡಲೇ ಇಲ್ಲ  ನಾನು ಅವಳಿಗೆ ಫೋನ್ ಮಾಡಿ ಆಗಿದ್ದಕ್ಕೆ ಕ್ಷಮೆ ಕೇಳಿದೆ. ಆಗಲು ಅವಳು ಅದೇ “Please Misunderstand ಮಾಡ್ಕೋ ಬ್ಯಾಡ.. ” ಹೇಳಿ ಫೋನ್ ಕಟ್ ಮಾಡಿದಳು.

ಹೀಗೆ ನಾವು ಒಬ್ಬರನೊಬ್ಬರನ್ನು ಕಡೆ ಗಾನಿಸುತ್ತ ಹೋದೆವು ಕೊನೆಗೆ ನನ್ನ ಕಾಲೇಜ್ ನ ಕೊನೆಯ ದಿನ ಬಂದೆ ಬಿಟ್ಟಿತ್ತು. ಆ ದಿನ ನಾನು ನನ್ನ್ ಅದೇ ಗ್ಯಾಂಗ್ ಜೊತೆ ಫೋಟೋ ತಗೆಸಿಕೊಳ್ತಾ ಇದ್ದೆ ಅವಳು ಅಲ್ಲಿಗೆ ಬಂದು “Autograph please.. ” ಅಂತ ಕೇಳಿದಳು. ಅದಕ್ಕೇ ನಾನು “Autograph ಕೊಡೋದಕ್ಕೆ ನಂಗೆ ಇಷ್ಟ ಇಲ್ಲ.. I don’t want you to keep me inside this small book and forgot.. you will be always remembered by this small heart with your cute smile.. ” ಅಂತ ಹೇಳೋಅಸ್ಟರಲ್ಲಿ ನನ್ನ ಕಣ್ಣಲ್ಲಿ ನಿರು ತುಂಬಿ ಬಂದಿತ್ತು. ಕೊನೆಗೂ ನಾನು ಅವಳಿಗೆ autograph ಕೊಡಲೇ ಇಲ್ಲ ಅವಳು ಹಾಗೆಯೇ ಹಿಂದೆ ತಿರುಗದೆ ಹೋಗಿ ಬಿಟ್ಟಳು. ನಾನು ಇದನ್ನೆಲ್ಲಾ ಮರೆತು ನಾವಿಬ್ಬರೂ  ಒಳ್ಳೆ ಸ್ನೇಹಿತರಾಗಿದ್ದೆವು ಆದ್ರೆ ಈಗ ನನ್ನ ಗೆಳತಿಗೆ ನನ್ನ ಗೆಳೆತನ ಬೇಕಾಗಿಲ್ಲ ಅಂತ ಅಲ್ಲಿಂದ ನನ್ನ Engineering ಡಿಗ್ರಿ ಮುಗಿಸಿ ಬೆಂಗಳೂರಿಗೆ MTech ಮಾಡಲು ಬಂದು ಬಿಟ್ಟೆ.

ಇದೆಲ್ಲ ಆಗಿ ನಾಲ್ಕು ವರುಷಗಳೇ ಕಳಿದಿತ್ತು ಅವಳು ಇನ್ನ ನನ್ನ ಪುಟ್ಟ ಮನಸಿನಲ್ಲಿ ಹಚ್ಚು ಹಸಿರಾಗೇ ಇದ್ದಳು ಆ ಒಂದು ದಿನ ನಾನು ಬೆಂಗಳೂರಿನ ಶಿವಾಜಿ ನಗರದ Sabina plaza ದಲ್ಲಿ ನನ್ನ ತಂಗಿ ಜೊತೆ purchasing ಮಾಡ್ತಿರ ಬೇಕಾದ್ರೆ ಮತ್ತೆ ಅವಳ ದರ್ಶನ ಆಯಿತು, ಅದೇ ನಗು ಅದೇ ಮಾತಿನ ಶೈಲಿ ಆದ್ರೆ ಅವಳು ಈಗ ಮದುವೆ ಆಗಿದ್ದಳು. ಅವಳು ನನ್ನ ತಂಗಿ ಅನ್ನು ಕಂಡು “ಇವಳು ನಿನ್ನ ಗರ್ಲ್ friendaa??…” ಅಂತ ಕೇಳಿದಳು. ನಾನು ಅದಕ್ಕೇ “Please Misunderstand ಮಾಡ್ಕೋ ಬ್ಯಾಡ.. ಇವಳು ನನ್ನ ತಂಗಿ..” ಅಂತ ಹೇಳಿ ಅವಳ ಮಾತನ್ನು ಅವಳಿಗೆ ವಾಪಾಸ್ ಕೊಟ್ಟು ಬಿಟ್ಟೆ. ಅವಳು ಈಗ ಬೆಂಗಳೂರಿನಲ್ಲಿ ಅವಳ ಗಂಡ ನ ಜೊತೆ ಹಾಯಗಿ ಸುಖವಾಗಿ ಇದ್ದಾಳೆ ನಾನು ಇನ್ನ ಆ ತರಹದೆ ನಗುವಿನ ಹುಡುಕಾಟ ದಲ್ಲಿ ಪರ ದೇಶ ದಲ್ಲಿದ್ದೇನೆ. ಎಸ್ಟೆ ಆದರು ಅವಳು ನನ್ನ ಒಳ್ಳೆ ಗೆಳತಿ ಆ ಕ್ಷಣ ನನ್ನನ್ನು ಹಾಗೆ ಮಾಡಿತು ಈ ಮೂಲಕ ನಾನು ಅವಳಿಗೆ ಕೇಳಿಕೊಳೋದು ಇಸ್ಟೆ “ನೀನು ನನ್ನ ದಯವಿಟ್ಟು Misunderstand ಮಾಡ್ಕೋ ಬ್ಯಾಡ..” ..

ಇಂತಿ ನಿಮ್ಮ

ಪುಟ್ಟಾ..:)

Posted in My Favourites | 4 ಟಿಪ್ಪಣಿಗಳು

ದೀಪಾವಳಿ ಯ ಶುಭಾಶಯಗಳು…

ಕತ್ತಲಿನಿಂದ ಬೆಳಕಿನಕಡೆಗೆ..

ಅಸತ್ಯದಿಂದ ಸತ್ಯದಕಡೆಗೆ..

ಅಧರ್ಮದಿಂದ ಧರ್ಮದಕಡೆಗೆ..

ಮ್ರತ್ಯುವಿನಿಂದ ಅಮರತ್ವ ದೆಡೆಗೆ..

ಶ್ರೀ ರಾಮಚಂದ್ರ ನು ಅಯೋಧ್ಯೆ ಗೆ ಮರಳಿದ ಸುದಿನವೇ ದೀಪಾವಳಿ ಹಬ್ಬ..

ಎಲ್ಲರಿಗು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..

ಇಂತಿ ನಿಮ್ಮ

ಪುಟ್ಟಾ..

Posted in My Favourites | ನಿಮ್ಮ ಟಿಪ್ಪಣಿ ಬರೆಯಿರಿ